ಚುನಾವಣೆ ಹಿನ್ನೆಲೆಯಲ್ಲಿ ಒಬ್ಬರನೊಬ್ಬರು ಟೀಕಿಸುವುದು ಮಮೂಲಿಯಾಗಿ ಬಿಟ್ಟಿದೆ. ಶಿವಮೊಗ್ಗದಲ್ಲಿ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಮಾಜಿ ಸಿಎಂ ಸಿದ್ದರಾಮಯ್ಯ ಕುರಿತು ನಾಲಿಗೆ ಹರಿಬಿಟ್ಟಿದ್ದಾರೆ. ಅಲೆಮಾರಿ ಸಿದ್ದರಾಮಯ್ಯ ಬಗ್ಗೆ ಏನು ಹೇಳಲಿ. ಕಾಂಗ್ರೆಸ್ ಗೊಂದು ನೀತಿ, ಸಿದ್ದರಾಮಯ್ಯ ಗೊಂದು ನೀತಿನಾ...?, ಸಿದ್ದರಾಮಯ್ಯ ಎಲ್ಲೇ ನಿಂತರೂ ಸೋಲ್ತಾರೆ. ಅವರೇ ಚುನಾವಣೆ ಗೆಲ್ಲುತ್ತಾರೆ ಎನ್ನುವ ವಿಶ್ವಾಸವಿಲ್ಲ. ಹಾಗಿರುವಾಗ ಸಿಎಂ ಆಗುವುದಾಗಿ ಹೇಳಿಕೆ ನೀಡಲು ಅಧಿಕಾರ ಕೊಟ್ಟಿದ್ಧು ಯಾರು ಎಂದು ಸಿದ್ಧರಾಮಯ್ಯ ವಿರುದ್ಧ ಈಶ್ವರಪ್ಪ ವಾಗ್ದಾಳಿ