ಹಾಸನ : ನಾನು ಸಿಎಂ ಆಕಾಂಕ್ಷಿಯಲ್ಲ ಎಂದು ಹಾಸನದಲ್ಲಿ ಇಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರು ಹೇಳಿದ್ದಾರೆ. ಸುದ್ಧಿಗಾರರೊಂದಿಗೆ ಮಾತನಾಡಿದ ಅವರು,ನನ್ನ ಕಡೆಯಿಂದ ಕಾಂಗ್ರೆಸ್ ನವರಿಗೆ ಯಾವುದೇ ತೊಂದರೆ ಆಗಿಲ್ಲ. ನಾನು ಸಮ್ಮಿಶ್ರ ಸರ್ಕಾರದ ಆಶಯಕ್ಕೆ ಧಕ್ಕೆ ತಂದಿಲ್ಲ. ವರ್ಗಾವಣೆ ಸೇರಿ ಯಾವುದೇ ಇಲಾಖೆಯಲ್ಲೂ ಹಸ್ತಕ್ಷೇಪ ಮಾಡಿಲ್ಲ. ಬೇಕಾದ್ರೆ ಸಮನ್ವಯ ಸಮಿತಿ ಸಭೆಯಲ್ಲಿ ವಿವರಿಸಿ ಹೇಳುವೆ ಎಂದು ಹೇಳಿದ್ದಾರೆ. ಅಲ್ಲದೇ ಬದುಕಿರುವವರೆಗೂ ನಾನು ಕುಮಾರಸ್ವಾಮಿ ಹೊಡೆದಾಡಲ್ಲ. ಸೋದರರು ಕಚ್ಚಾಡುತ್ತಾರೆ ಅಂದುಕೊಂಡಿದ್ರೆ