ಕಾಂಗ್ರೆಸ್ ಪಕ್ಷದ ನಾಯಕರು ನಾವು ಗೆಲ್ಲುತ್ತೇವೆ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದಾರೆ. ಹಣದಿಂದ ಗೆಲ್ಲುವ ಪ್ರಯತ್ನ ಮಾಡಿದ್ದಾರೆ. ನನ್ನ ಜಿಲ್ಲೆಯ ಜನ ಹಣ ತಿರಸ್ಕಾರ ಮಾಡಿದ್ದಾರೆ. ನಮ್ಮ ಜಿಲ್ಲೆಯ ಜನ ನಮ್ಮನ್ನು ಕೈ ಬಿಡೋಲ್ಲ ಎಂದು ಬಿ.ಶ್ರೀರಾಮುಲು ಹೇಳಿದ್ದಾರೆ.ಬಳ್ಳಾರಿಯಲ್ಲಿ ಮಾತನಾಡಿದ ಅವರು, ಭ್ರಷ್ಟಾಚಾರದ ಹಣ, ಕಸಿದುಕೊಂಡಿರುವ ಹಣವನ್ನು ಕಾಂಗ್ರೆಸ್ ನವರು ಇಲ್ಲಿ ಹಂಚುತ್ತಿದ್ದಾರೆ. ಆದರೆ ಶಾಂತ ಅವರು ಗೆಲ್ಲುವ ವಿಶ್ವಾಸ ಇದೆ ಎಂದರು.ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪ ಓದಿರೋರು, ನಾವು ಮನುಷ್ಯರನ್ನು ಓದಿದ್ದೇವೆ.