ದಿನೇ ದಿನೇ ಕರುನಾಡ ಚುನಾವಣಾ ಕಣ ರಂಗೇರುತ್ತಿದ್ದು, ಲಿಂಗಾಯತರನ್ನ ಮತ್ತೆ ಸಿಎಂ ಮಾಡಬೇಕು ಅನ್ನೊ ವಿಚಾರಕ್ಕೆ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಪ್ರತಿಕ್ರಿಯಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಪ್ರತಿಯೊಂದು ಸಮುದಾಯಗಳಿಂದಲೂ ಸಿಎಂ ಆಗಬೇಕು ಅನ್ನೊ ಅಪೇಕ್ಷೆ ಇದೆ. ಬಿಜೆಪಿಯಲ್ಲಿ ಶಾಸಕನಾದ ಮೇಲೆ ಯಾವುದೇ ಜಾತಿ ಬಗ್ಗೆ ಚರ್ಚೆ ಮಾಡಲ್ಲ. ಅವಕಾಶ ಕೊಡಬೇಕು ಅನ್ನೋದು ಬಂದಾಗ ಪಕ್ಷ ತೀರ್ಮಾನ ಮಾಡುತ್ತದೆ ಎಂದು ತಿಳಿಸಿದ್ರು. ರಾಜ್ಯದಲ್ಲಿ ವಿಶೇಷವಾಗಿ ವೀರಶೈವ ಸಮಾಜದವರು ಹೆಚ್ಚಾಗಿದ್ದು, ತಮ್ಮನ್ನು