ಬೆಂಗಳೂರು: ಕಾಂಗ್ರೆಸ್ ಟಿಕೆಟ್ ಹಂಚಿಕೆಯನ್ನು ಗುತ್ತಿಗೆದಾರರು ತೀರ್ಮಾನಿಸುತ್ತಿದ್ದಾರೆ ಎಂಬ ಹಿರಿಯ ಕಾಂಗ್ರೆಸ್ ನಾಯಕ ವೀರಪ್ಪ ಮೊಯಿಲಿ ಟ್ವೀಟ್ ಪ್ರಮಾದಕ್ಕೆ ಇದೀಗ ಪುತ್ರ ಹರ್ಷ ಮೊಯಿಲಿ ಬೆಲೆ ತೆತ್ತಿದ್ದಾರೆ. ಹರ್ಷ ಮೊಯಿಲಿಗೆ ಕೆಪಿಸಿಸಿ ನೋಟೀಸ್ ಜಾರಿ ಮಾಡಿದೆ. ರಾಜ್ಯ ಉಸ್ತುವಾರಿ ಕೆಸಿ ವೇಣುಗೋಪಾಲ್ ಸೂಚನೆ ಮೇರೆಗೆ ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್ ಹರ್ಷ ಮೊಯಿಲಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ.ಮೊಯಿಲಿ ಖಾತೆಯಿಂದ ಹರ್ಷ ಮೊಯಿಲಿ ಟ್ವೀಟ್ ಮಾಡಿದ್ದರು ಎನ್ನಲಾಗಿದೆ.