ಮಂಡ್ಯ : ಕಾಂಗ್ರೆಸ್ –ಜೆಡಿಎಸ್ ಮಿತ್ರ ಪಕ್ಷವಾಗಿ ಆಡಳಿತ ನಡೆಸಿದರೂ ಕೂಡ ಒಳಗೊಳಗೆ ಒಬ್ಬರ ಮೇಲೆ ಒಬ್ಬರು ಕಿಡಿಕಾರುತ್ತಲೇ ಇದ್ದಾರೆ. ಅದೇರೀತಿ ಇದೀಗ ಕಾಂಗ್ರೆಸ್ ನಾಯಕ ಚಲುವರಾಯಸ್ವಾಮಿ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸಭೆ ಚುನಾವಣೆಯಲ್ಲಿ 80 ಸೀಟು ಗೆದ್ದಿದ್ದರೂ ಸಿಎಂ ಹುದ್ದೆ ಬಿಟ್ಟುಕೊಟ್ಟಿದ್ದೇವೆ. ಆದರೂ ಜೆಡಿಎಸ್ ನವರಿಗೆ ಹೇಗೆ ನಡೆದುಕೊಳ್ಳಬೇಕೆಂದು ಗೊತ್ತಿಲ್ಲ ಎಂದು ಕಿಡಿಕಾರಿದ್ದಾರೆ. ಮಂಡ್ಯ ಲೋಕಸಭೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಹಾಕುವುದಿಲ್ಲ