ನಮ್ಮದೇಶದಲ್ಲಿ ಯಾವುದಾದರೊಂದು ಮದ್ರಸಾದಲ್ಲಿ ಭಯೋತ್ಪಾದನಾ ಚಟುವಟಿಕೆಗಳಿಗೆ ತರಬೇತಿ ನೀಡಿದ್ದು ಸಾಬೀತಾದಲ್ಲಿ ಸಿಟಿ ರವಿ ಏನು ಹೇಳುತ್ತಾರೋ, ಅದನ್ನು ಮಾಡಲು ತಾನು ತಯಾರೆಂದು ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ರಾಜ್ಯಾಧ್ಯಕ್ಷ ಸಯೀದ್ ಅಹ್ಮದ್ ಚಾಲೆಂಜ್ ಮಾಡಿದ್ದಾರೆ. ಮಂಗಳೂರು ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಬಿಜೆಪಿಗರು ಚುನಾವಣೆ ಗೆಲ್ಲಬೇಕೆಂದರೆ ಹಿಂದೂ-ಮುಸ್ಲಿಂ ವಿಚಾರ, ಪಾಕಿಸ್ತಾನ-ಭಾರತ ವಿಚಾರ ಎತ್ತಬೇಕು. ಈಗ ತಾಲಿಬಾನ್ ವಿಚಾರವನ್ನು ಮುಂದಿಟ್ಟಿದ್ದಾರೆ. ಮದ್ರಸಾದಲ್ಲಿ ಕುರಾನ್ ಬೋಧನೆ ಮಾಡಲಾಗುತ್ತದೆ. ಕುರಾನ್ ಓದಿ ಅರ್ಥ ತಿಳಿದುಕೊಂಡವರು