ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಕಾಂಗ್ರೆಸ್ ನಲ್ಲಿ ಇದೀಗ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕಾಗಿ ನಾಯಕರ ನಡುವೆ ಹಗ್ಗ ಜಗ್ಗಾಟ ಶುರುವಾಗಿದೆ.ಡಿಸಿಎಂ ಜಿ ಪರಮೇಶ್ವರ್ ತಮ್ಮ ಆಪ್ತರಾದ ಕೆಎಚ್ ಮುನಿಯಪ್ಪ ಪರ ಬ್ಯಾಟಿಂಗ್ ಮಾಡುತ್ತಿದ್ದಾರೆ. ಆದರೆ ಈಗಾಗಲೇ ದಲಿತರಿಗೆ ಉಪ ಮುಖ್ಯಮಂತ್ರಿ ಕೊಟ್ಟ ಕಾರಣ, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಲಿತ ಸಮುದಾಯದವರಾದ ಮುನಿಯಪ್ಪರನ್ನು ಆಯ್ಕೆ ಮಾಡುವುದು ಅನುಮಾನ. ಹೀಗಾಗಿ ಹಿರಿಯ ನಾಯಕ, ಈಡಿಗ ಸಮುದಾಯಕ್ಕೆ ಸೇರಿದ ಬಿಕೆ ಹರಿಪ್ರಸಾದ್ ಪರ