ಸಿಎಂ ವಿರುದ್ಧ ಕೈ ನಾಯಕರು ಗರಂ!

ಬೆಂಗಳೂರು, ಬುಧವಾರ, 3 ಏಪ್ರಿಲ್ 2019 (14:49 IST)

ಮಾಜಿ ಸಿಎಂ ಕರೆದಿದ್ದ ಸಭೆಯಲ್ಲಿ ಕಾಂಗ್ರೆಸ್ ಮುಖಂಡರು ಸಿಎಂ ವಿರುದ್ಧ ಗರಂ ಆಗಿರುವ ಘಟನೆ ನಡೆದಿದೆ.
ಮಂಡ್ಯ ಕಾಂಗ್ರೆಸ್ ಮುಖಂಡರ ಜೊತೆ  ಸಿದ್ದರಾಮಯ್ಯ ಸಭೆ ನಡೆಸಿದ್ದಾರೆ. ಸಿದ್ದರಾಮಯ್ಯ ನಿವಾಸ ಕಾವೇರಿಯಲ್ಲಿ ಸಭೆ ನಡೆಯಿತು. ಮಂಡ್ಯಜಿಲ್ಲೆಯ  ಎಂಟು ಕ್ಷೇತ್ರಗಳ ಕಾಂಗ್ರೆಸ್ ಮುಖಂಡರು ಭಾಗಿಯಾಗಿದ್ದರು.

ಮೈತ್ರಿ ಅಭ್ಯರ್ಥಿಯನ್ನ ಬೆಂಬಲಿಸುವ ವಿಚಾರವಾಗಿ ಸಭೆ ಆಯೋಜಿಸಲಾಗಿತ್ತು. ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಸ್ಪರ್ಧೆ ಹಿನ್ನೆಲೆಯಲ್ಲಿ ಮಂಡ್ಯ ಕಾಂಗ್ರೆಸ್ ಮುಖಂಡರು  ಸುಮಲತಾ ಪರ ಇದ್ದಾರೆ ಎಂಬ ಊಹಪೋಹ ಕೇಳಿ ಬರುತ್ತಿವೆ. ಈ ಹಿನ್ನೆಲೆ ಮಂಡ್ಯ ಕಾಂಗ್ರೆಸ್ ಮುಖಂಡರಲ್ಲಿ ಇರುವ ಬಂಡಾಯ ಶಮನ ಗೊಳಿಸುವಲ್ಲಿ ಸಭೆ ನಡೆಸಲಾಯಿತು.
ಸಭೆಯಲ್ಲಿ ಮಾಜಿ ಶಾಸಕ ಚೆಲುವರಾಯ ಸ್ವಾಮಿ ಮತ್ತು ಬಂಡಿ ಸಿದ್ದೇಗೌಡ ಸೇರಿದಂತೆ ಪ್ರಮುಖ ಮುಖಂಡರು‌ ಉಪಸ್ಥಿತಿ ಇದ್ದರು.  

ಸಿಎಂ ಅದೇನೇ ಹೇಳಲಿ, ದೇವೇಗೌಡರು ನಮ್ಮ ಜೊತೆಗಿದ್ದಾರೆ ಎಲ್ಲವನ್ನೂ ಸರಿ ಮಾಡೋಣ. ಹಾಸನ, ಮೈಸೂರು, ಮಂಡ್ಯ ,ತುಮಕೂರಲ್ಲಿ ನಾವು ಗೆಲ್ಲಬೇಕಿದೆ. ಚುನಾವಣೆವರೆಗೂ ಎಲ್ಲವನ್ನೂ ಸಹಿಸಿಕೊಂಡಿರಿ, ತಾಳ್ಮೆಯಿಂದಿರಿ.
ಮುಂದೆ ಏನಾಗುತ್ತೋ ಕಾದು ನೋಡೋಣ ಅಂತ ಸಿದ್ದರಾಮಯ್ಯ ಹೇಳಿದ್ರು.

ಮೇಲ್ನೋಟಕ್ಕೆ ಸಿದ್ದು ಮಾತಿಗೆ ಆಯ್ತು ಅನ್ನೋ ರೀತಿಯಲ್ಲಿ ಒಪ್ಪಿಗೆ ನೀಡಿದರು ಕೈಮುಖಂಡ್ರು.  ಸಭೆಯಲ್ಲಿ ‌ ಅಸಮಾಧಾನಗೊಂಡ ಚೆಲುವರಾಯಸ್ವಾಮಿ ಮತ್ತು ತಂಡ, ಒಂದು ಬಾರಿಯಾದ್ರೂ ನಮ್ಮನ್ನ ಕರೆದು ಮಾತಾಡಿದ್ದಾರಾ ಸಿಎಂ? ನಮಗೆ ಮಾನ, ಮರ್ಯಾದೆ, ಗೌರವ ಇಲ್ವಾ? ಏನಾಗುತ್ತೋ ಆಗಲಿ ಬಿಡಿ ಸರ್ ನೋಡೇ ಬಿಡೋಣ ಎಂದು ಗರಂ ಆದರು.
ಆಗ ಸಿದ್ದರಾಮಯ್ಯ ಮಾತನಾಡಿ, ನೀವು ನಿಖಿಲ್ ಗೆ ಗೆಲ್ಲಿಸದಿದ್ದರೆ ಕ್ಷೇತ್ರ ಕಾಂಗ್ರೆಸ್ ಕೈ ಬಿಟ್ಟು ಹೋಗುತ್ತೆ.

ಗೆದ್ದರೆ ಸುಮಲತಾರೇನೂ ಕಾಂಗ್ರೆಸ್ ಗೆ ಬರ್ತಾರೆ ಅನ್ಕೊಂಡಿದ್ದೀರಾ? ಅವರು ಬಿಜೆಪಿಗೆ ಹೋಗೋದು ಗ್ಯಾರಂಟಿ. ಜೆಡಿಎಸ್ ಗೆದ್ದರೆ ಮುಂದೆ ಮತ್ತೇ ಕ್ಷೇತ್ರವನ್ನ ಕೈ ವಶ ಮಾಡಿಕೊಳ್ಳಬಹುದು ಎಂಬ ಲೆಕ್ಕಾಚಾರವನ್ನು ಬಿಡಿಸಿಟ್ಟರು.


 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಉಮೇಶ್ ಜಾಧವ್ ಟೆಂಪಲ್ ರನ್ : ನಾಮಪತ್ರ ಸಲ್ಲಿಕೆ

ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸುವ ಮೊದಲು ಟೆಂಪಲ್ ರನ್ ಗೆ ಅಭ್ಯರ್ಥಿಗಳು ಆದ್ಯತೆ ನೀಡುತ್ತಿದ್ದಾರೆ.

news

ಹೆದ್ದಾರಿ ತಡೆ ನಡೆಸಿದ ರೈತರು

ಹರಿಹರ- ದಾವಣಗೆರೆ ತಾಲ್ಲೂಕಿನ ರೈತರಿಂದ ಹೆದ್ದಾರಿ ತಡೆದು ಆಕ್ರೋಶ ವ್ಯಕ್ತಪಡಿಸಲಾಗಿದೆ.

news

ಯುವಕರೇ ಎಚ್ಚರ!ಒಂಟಿ ಹೆಣ್ಣುಮಕ್ಕಳನ್ನು ಕೆಣುಕುವವರ ಮೇಲೆ ಸ್ಥಳದಲ್ಲೇ ದಾಖಲಾಗುತ್ತೆ ಕೇಸು

ಉಡುಪಿ: ಒಂಟಿ ಹೆಣ್ಣುಮಕ್ಕಳ ಮೇಲೆ ಯುವಕರ ದೌರ್ಜನ್ಯ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಇದೀಗ ಹೆಣ್ಣು ...

news

ದಾಂಪತ್ಯ ಜೀವನ ಮುರಿದು ಬಿದ್ದಿದ್ದಕ್ಕೆ 7 ದಿನಗಳ ಕಾಲ 7 ಪುರುಷರ ಜೊತೆ ಮಲಗಿದ ಮಹಿಳೆ. ಕಾರಣವೇನು ಗೊತ್ತಾ?

ಆಸ್ಟ್ರೇಲಿಯಾ : ಮಹಿಳೆಯೊಬ್ಬಳು 7 ವರ್ಷಗಳ ದಾಂಪತ್ಯ ಜೀವನ ಮುರಿದು ಬಿದ್ದ ಮೇಲೆ ಸತತ 7 ದಿನಗಳ ಕಾಲ 7 ...