ಶಾಸಕರು ತಂಗಿದ್ದ ರೆಸಾರ್ಟ್ ಗೆ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಿದ ಕಾಂಗ್ರೆಸ್ ನಾಯಕರು

ಬೆಂಗಳೂರು| pavithra| Last Modified ಶನಿವಾರ, 19 ಜನವರಿ 2019 (11:39 IST)
ಬೆಂಗಳೂರು : ಈಗಲ್ಟನ್, ವಂಡರ್ ಲಾ ರೆಸಾರ್ಟ್ ನಲ್ಲಿ ಕೈ ಶಾಸಕರ ವಾಸ್ತವ್ಯದ ಹಿನ್ನಲೆಯಲ್ಲಿ ರೆಸಾರ್ಟ್ ಗೆ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.


ಬಿಜೆಪಿಯವರ ಅಪರೇಷನ್ ಕಮಲಕ್ಕೆ ಹೆದರಿ ಈಗಾಗಲೇ ಕ್ರಾಂಗ್ರೆಸ್ ನಾಯಕರು ತಮ್ಮ ಶಾಸಕರನ್ನು ರೆಸಾರ್ಟ್ ನಲ್ಲಿ ಇರಿಸಿದ್ದಾರೆ. ಆದರೆ ಅತೃಪ್ತರಿಂದ ಶಾಸಕರನ್ನು ಸೆಳೆಯಬಹುದು ಎಂಬ ಭಯದಿಂದ ಇದೀಗ ಶಾಸಕರು ತಂಗಿದ್ದ ರೆಸಾರ್ಟ್ ಗೆ ಟೈಟ್ ಸೆಕ್ಯೂರಿಟಿ ನೀಡಲಾಗಿದೆ.


ರೆಸಾರ್ಟ್ ಒಳಗೆ ಓರ್ವ ಸರ್ಕಲ್ ಇನ್ಸ್ ಪೆಕ್ಟರ್ , ಇಬ್ಬರು ಸಬ್ ಇನ್ಸ್ ಪೆಕ್ಟರ್ ನೇತೃತ್ವದಲ್ಲಿ ಬಂದೋಬಸ್ತ್ ಮಾಡಲಾಗಿದೆ. ಹಾಗೇ ರೆಸಾರ್ಟ್ ನ ಹೊರಗೆ 10 ಪೊಲೀಸ್ ಸಿಬ್ಬಂದಿಯಿಂದ ಭದ್ರತೆ ಏರ್ಪಡಿಸಲಾಗಿದೆ. ಅಲ್ಲದೇ ಪೊಲೀಸರು ರೆಸಾರ್ಟ್ ಗೆ ಬಂದ ಎಲ್ಲಾ ವಾಹನಗಳ ತಪಾಸಣೆ ನಡೆಸುತ್ತಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್


ಇದರಲ್ಲಿ ಇನ್ನಷ್ಟು ಓದಿ :