ಕಾಂಗ್ರೆಸ್ ಪಕ್ಷವನ್ನು ಬಿಟ್ಟು ಬೇರೆ ಬೇರೆ ಪಕ್ಷಗಳಿಗೆ ಹೋಗಿರುವ ಘಟಾನುಘಟಿ ನಾಯಕರನ್ನು ಮಾತೃಪಕ್ಷಕ್ಕೆ ಕರೆ ತರಲು ವೇದಿಕೆ ಸಿದ್ಧಗೊಳ್ಳುತ್ತಿದೆ. ಕೆಪಿಸಿಸಿ ನೂತನ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಈ ವಿಷಯ ತಿಳಿಸಿದ್ದು, ಪಕ್ಷ ಬಿಟ್ಟವರನ್ನ ಮತ್ತೆ ಕರೆತರಲು ಸಮಿತಿಯೊಂದನ್ನು ರಚನೆ ಮಾಡಲಾಗಿದ್ದು ಅದಕ್ಕೆ ಅಲ್ಲಂ ವೀರಭದ್ರಪ್ಪ ನೇತೃತ್ವ ವಹಿಸಲಿದ್ದಾರೆ ಎಂದಿದ್ದಾರೆ.ಅಧಿಕಾರಕ್ಕೆ ಬರುವವರು ನಮಗೆ ಬೇಡವೇ ಬೇಡ. ಹೈಕಮಾಂಡ್ ಮೇಲೆ ನಂಬಿಕೆ, ಪಕ್ಷದ ಮೇಲೆ ವಿಶ್ವಾಸ ಇದ್ದವರು ಪಕ್ಷಕ್ಕೆ ಮರಳಿ ಸೇರ್ಪಡೆಗೊಳ್ಳಬೇಕು ಎಂದಿದ್ದಾರೆ.