ರಾಯಚೂರು : ಕಾರು ಬದಿಗಿಟ್ಟು ಬೈಕ್ ಓಡಿಸಿಕೊಂಡು ಜನರ ಸಮಸ್ಯೆಗಳನ್ನು ಆಲಿಸುವುದರ ಮೂಲಕ ಇದೀಗ ಕಾಂಗ್ರೆಸ್ ಶಾಸಕರೊಬ್ಬರು ಜನರ ಮೆಚ್ಚುಗೆ ಪಡೆದಿದ್ದಾರೆ. ಲಿಂಗಸುಗೂರು ಕ್ಷೇತ್ರದ ಶಾಸಕ ಡಿ.ಎಸ್ ಹೂಲಿಗೇರಿ ಅವರು ಪಟ್ಟಣದಲ್ಲಿ ಬೈಕ್ ರೈಡ್ ಮಾಡಿಕೊಂಡೇ ಗಲ್ಲಿ ಗಲ್ಲಿಗಳಲ್ಲಿ ತಿರುಗಾಡಿ ಕುಡಿಯುವ ನೀರು, ರಸ್ತೆ, ಚರಂಡಿ ವ್ಯವಸ್ಥೆಗಳನ್ನ ಪರಿಶೀಲಿಸಿದಲ್ಲದೇ ಅಲ್ಲಿನ ಜನರ ಜೊತೆ ಮಾತನಾಡಿ ಸಮಸ್ಯೆಗಳ ಕುರಿತು ಮಾಹಿತಿ ಪಡೆದು ಸಮಸ್ಯೆಗಳನ್ನು ಬಗೆಹರಿಸುವಂತೆ ಭರವಸೆ ನೀಡಿದ್ದಾರೆ. ಅಲ್ಲದೇ ಸಿಸಿ ರಸ್ತೆಗಳು