ಮುಂಬರುವ ಲೋಕಸಭೆ ಎಲೆಕ್ಷನ್ ನಲ್ಲಿ ಜೆಡಿಎಸ್ ಪಕ್ಷದ ಜತೆ ಹೊಂದಾಣಿಕೆ ಮಾಡಿಕೊಳ್ಳುವುದು ನಿಶ್ಚಿತ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಮುಂಬರಲಿರುವ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳುತ್ತೇವೆ. ಜೆಡಿಎಸ್ನವರು ಎಷ್ಟು ಕ್ಷೇತ್ರ ತಮಗೆ ಬೇಕು ಎಂಬುದನ್ನು ಇನ್ನು ತಿಳಿಸಿಲ್ಲ. ಸಭೆಯಲ್ಲಿ ಕುಳಿತು ಚರ್ಚಿಸಿ ಅವರು ಎಷ್ಟು ಕೇಳಬಹುದು, ಎಷ್ಟರಲ್ಲಿ ಅವರು ಗೆಲ್ಲಬಹುದು ಎಂಬುದನ್ನು ಪರಾಮರ್ಶಿಸಿ ಸ್ಥಾನ ಹೊಂದಾಣಿಕೆ ಮಾಡಿಕೊಳ್ಳುತ್ತೇವೆ. ಜೆಡಿಎಸ್ ನೊಂದಿಗೆ ಲೋಕಸಭೆಯಲ್ಲಿ