ಬಿಬಿಎಂಪಿಯ ಕಾರ್ನರ್ ನಿವೇಶನ ಅಡ ಇಡಲಾಗುತ್ತಿದ್ದು, ಸರಕಾರದ ಖಜಾನೆಯನ್ನು ಲೂಟಿ ಮಾಡಲಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿ.ಯೂರಪ್ಪ ಆರೋಪಿಸಿದ್ದಾರೆ. ಜಿಲ್ಲೆಯ ಹಿರಿಯೂರು ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಅವರದ್ದು ಕಾಮ್ ಕೀ ಬಾತ್ ಅಲ್ಲ ಲೂಟ್ ಕೀ ಬಾತ್, ಪ್ರಧಾನಿಯವರನ್ನು ಟೀಕಿಸಿ ದೊಡ್ಡವರಾಗುವ ಭ್ರಮೆಯಲ್ಲಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ ಕರ್ನಾಟಕವನ್ನು ಸಾಲಗಾರರ ರಾಜ್ಯವನ್ನು ಮಾಡುವ ಉದ್ದೇಶ ಸಿಎಂ ಸಿದ್ದರಾಮಯ್ಯ ಅವರಿಗಿದ್ದಂತೆ ಕಾಣುತ್ತದೆ. ಬಡವರ ಜತೆ ಚೆಲ್ಲಾಟವಾಡುತ್ತಿರುವ ಸಿಎಂ