ಬೆಂಗಳೂರು: ಸಿಎಂ ಸಿದ್ದರಾಮಯ್ಯ ಆಗಾಗ ಕನ್ನಡ ಭಾಷಾ ಪ್ರೇಮ ಮೆರೆದು ಮೆಚ್ಚುಗೆಗೆ ಪಾತ್ರರಾಗುತ್ತಾರೆ. ಆದರೆ ಕಾಂಗ್ರೆಸ್ ಪಕ್ಷ ಈ ಬಾರಿಯ ಚುನಾವಣಾ ಪ್ರಣಾಳಿಕೆಯಲ್ಲಿ ಕನ್ನಡ ಭಾಷಾ ಪ್ರೇಮ ಮೆರೆಯುವಲ್ಲಿ ವಿಫಲವಾಗಿದೆ.ಮಾಜಿ ಕೇಂದ್ರ ಸಚಿವ ಎಂ. ವೀರಪ್ಪ ಮೊಯಿಲಿ ನೇತೃತ್ವದಲ್ಲಿ ತಯಾರಾದ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಎಲೆಕ್ಷನ್ ಮ್ಯಾನಿಫೆಸ್ಟೋ ಎಂದು ಪದ ಪ್ರಯೋಗಿಸಿದ್ದು, ಟೀಕೆಗೆ ಗುರಿಯಾಗಿದೆ.ಜನ ಸಾಮಾನ್ಯರಿಗೆ ಸುಲಭವಾಗಿ ಅರ್ಥವಾಗುವ ಶಬ್ಧ ಕನ್ನಡದಲ್ಲೇ ಇರುವಾಗ ಮ್ಯಾನಿಫೆಸ್ಟೋ ಎಂಬ ಪದ ಪ್ರಯೋಗಿಸಿದ್ದು