ಅವರಿಬ್ಬರು ಒಂದೇ ಪಕ್ಷದ ಪ್ರಮುಖ ನಾಯಕರು. ಸಚಿವರೂ ಹೌದು. ಆದರೆ ಅವರಿಬ್ಬರ ನಡುವೆ ಆರಂಭಗೊಂಡಿರುವ ಶೀಥಲ ಸಮರ ಇದುವರೆಗೂ ಕೊನೆಯಾಗಿಲ್ಲ. ಪರಸ್ಪರ ಆರೋಪ ಪ್ರತ್ಯಾರೋಪಗಳು ಸದ್ದಿಲ್ಲದೇ ಮುಂದುವರಿದಿವೆ. ಸಚಿವ ಡಿ.ಕೆ. ಶಿವಕುಮಾರ್ ಹಾಗೂ ಸಚಿವ ರಮೇಶ್ ಜಾರಕಿಹೊಳಿ ನಡುವಿನ ಮುಸುಕಿನ ಗುದ್ದಾಟ ಮುಂದುವರೆದಿದೆ. ಕೆಲವು ಶಾಸಕರು ಸಚಿವ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಮುಂಬೈಗೆ ತೆರಳುತ್ತಾರೆ ಎಂಬ ವರದಿಗಳ ಹಿಂದೆ ಪ್ರಭಾವಿ ಸಚಿವರ ಕೈವಾಡವಿದೆ ಎಂದು ಸಚಿವ ರಮೇಶ್ ಜಾರಕಿಹೊಳಿ ಪರೋಕ್ಷವಾಗಿ