ಶಿವಮೊಗ್ಗ : ಶಿವಮೊಗ್ಗ ಭದ್ರಾವತಿ ತಾಲೂಕು ಕೊಡ್ಲಿಗೇರೆ ಸಮೀಪ ಅರಣ್ಯದಲ್ಲಿ ದೇವಸ್ಥಾನ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ಅರಣ್ಯಧಿಕಾರಿಗೆ ಕಾಂಗ್ರೆಸ್ ಶಾಸಕರೊಬ್ಬರು ಅವಾಜ್ ಹಾಕಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ. ಅರಣ್ಯ ಸ್ಥಳವನ್ನು ಆಕ್ರಮಿಸಿ ದೇವಾಸ್ಥಾನ ನಿರ್ಮಾಣ ಮಾಡದಂತೆ ಅರಣ್ಯಾಧಿಕಾರಿ ನೋಟಿಸ್ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸ್ಥಳೀಯರು ಶಾಸಕರಿಗೆ ದೂರು ನೀಡಿದ್ದಾರೆ. ಈ ವಿಚಾರಕ್ಕೆ ಭದ್ರಾವತಿ ಕ್ಷೇತ್ರದ ಶಾಸಕ ಸಂಗಮೇಶ್ ಅವರು ಅರಣ್ಯಾಧಿಕಾರಿ ಸೀನಪ್ಪ ಶೆಟ್ಟಿಗೆ ಫೋನ್ ಮಾಡಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.