ಹಾಸನ: ಬೇಲೂರಿನ ಶಾಸಕರಾದ ವೈಎನ್ ರುದ್ರೇಶ್ ಗೌಡರು ವಿಧಿವಶರಾಗಿರುವ ಸುದ್ದಿಯನ್ನು ತಿಳಿದು ಮನಸ್ಸಿಗೆ ನೋವಾಗಿದೆ.ರಾಜಕೀಯದಲ್ಲಿ ಅಜಾತ ಶತ್ರು , ಸಜ್ಜನ ರಾಜಕಾರಣಿಯಾಗಿದ್ದ ವೈಎನ್ ರುದ್ರೇಶ್ ಗೌಡರ ನಿಧನದಿಂದ ಜಿಲ್ಲೆಯ ಒಬ್ಬ ಸಜ್ಜನ ರಾಜಕಾರಣಿ ಯನ್ನು ಕಳೆದುಕೊಂಡಿದೆ ಎಂದು ಮಾಜಿ ಪ್ರಧಾನಿ ಹಾಗೂ ಲೋಕಸಭಾ ಸದಸ್ಯರಾದ ಹೆಚ್.ಡಿ.ದೇವೇಗೌಡರು ಸಂತಾಪ ಸೂಚಿಸಿದ್ದಾರೆ.