ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಬಳಿಕ ಉಂಟಾದ ಭಿನ್ನಮತ ಶಮನಕ್ಕೆ ಕಾಂಗ್ರೆಸ್ ಹೊಸದೊಂದು ಸೂತ್ರ ಕಂಡುಕೊಂಡಿದೆ ಎಂದು ಡಿಸಿಎಂ ಜಿ ಪರಮೇಶ್ವರ್ ಹೇಳಿದ್ದಾರೆ.ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈಗ ನೇಮಕವಾದ ಸಚಿವರು 2 ವರ್ಷಷಗಳ ಕಾಲ ಸಚಿವರಾಗಿರುತ್ತಾರೆ. ಅವರ ಸಾಧನೆ ಗಮನಿಸಿಕೊಂಡು ಮುಂದುವರಿಸಲಾಗುತ್ತದೆ. ಸದ್ಯದಲ್ಲೇ ನೂತನವಾಗಿ ಆರು ಸಚಿವರ ಸೇರ್ಪಡೆಯಾಗಲಿದೆ ಎಂದು ಅವರು ಹೇಳಿದ್ದಾರೆ.ಎರಡು ವರ್ಷಗಳ ಅವಧಿಗೆ ಸಚಿವರನ್ನು ನೇಮಕ ಮಾಡಲಾಗುತ್ತದೆ. ಈ ಬದಲಾವಣೆಗೆ ರಾಹುಲ್ ಗಾಂಧಿಯವರೇ ಸೂಚಿಸಿದ್ದಾರೆ. ಹೀಗಾಗಿ