ಜೆಡಿಎಸ್ - ಕಾಂಗ್ರೆಸ್ ನಾಯಕರ ಕುಡುಗೋಲುಗಳು ಮತ್ತು ಮಚ್ಚುಗಳು ಹರಿತ ಕಳೆದುಕೊಂಡು ಮೊಂಡಾಗಿವೆ. ಹೀಗಂತ ಬಿಜೆಪಿ ನೂತನ ಶಾಸಕ ಟಾಂಗ್ ನೀಡಿದ್ದಾರೆ.ಮಾಜಿ ಸಚಿವ, ಶಾಸಕ ಸಿ.ಎಸ್.ಪುಟ್ಟರಾಜು ಹೇಳಿಕೆಗೆ ಕೆ.ಆರ್.ಪೇಟೆ ಬಿಜೆಪಿ ಶಾಸಕ ಕೆ.ಸಿ.ನಾರಾಯಣಗೌಡ ಸಹಕಾರ ಸಂಘಗಳ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಆಯೋಜಿಸಿದ್ದ ಪೂರ್ವಬಾವಿ ಸಭೆಯಲ್ಲಿ ಟಾಂಗ್ ಕೊಟ್ಟಿದ್ದಾರೆ. ಶಾಸಕ ಸಿ.ಎಸ್.ಪುಟ್ಟರಾಜು ಅವರಿಗೆ ಲೋಕಸಭಾ ಚುನಾವಣೆಯಲ್ಲಿ ಯಾವ ರೀತಿ ಬಿ ಫಾರಂ ಸಿಕ್ಕಿತು ಎಂಬುದು ನನಗೆ ಚೆನ್ನಾಗಿ ಗೊತ್ತು.