Widgets Magazine

ಟಿಪ್ಪು ಜಯಂತಿ ವಿಚಾರವಾಗಿ ಎಚ್ಚರಿಕೆಯ ಹೆಜ್ಜೆ ಇಡಲು ತೀರ್ಮಾನಿಸಿದ ಕಾಂಗ್ರೆಸ್

ಬೆಂಗಳೂರು| pavithra| Last Modified ಶುಕ್ರವಾರ, 2 ಆಗಸ್ಟ್ 2019 (11:12 IST)
ಬೆಂಗಳೂರು : ಈ ಹಿಂದೆ ಟಿಪ್ಪು ಜಯಂತಿ ವಿಚಾರವಾಗಿ ಪಕ್ಷಕ್ಕೆ ಬಾರೀ ಡ್ಯಾಮೇಜ್ ಆದ ಹಿನ್ನಲೆ ಇದೀಗ ಟಿಪ್ಪು ಜಯಂತಿ ವಿಚಾರವಾಗಿ ಎಚ್ಚರಿಕೆಯಿಂದ ಹೆಜ್ಜೆ ಇಡಲು ಕಾಂಗ್ರೆಸ್ ತೀರ್ಮಾನಿಸಿದೆ ಎನ್ನಲಾಗಿದೆ.
ಬಿಜೆಪಿ ಸರ್ಕಾರ ಜಾರಿಗೆ ಬಂದ ತಕ್ಷಣ ಟಿಪ್ಪು ಜಯಂತಿ ಆಚರಣೆ ರದ್ದಿಗೆ ಮುಂದಾಯಿತು. ಇದರಿಂದ ರಾಜ್ಯದಾದ್ಯಂತ ಬಾರೀ ವಿರೋಧ ವ್ಯಕ್ತವಾಗಿದೆ. ಈ ಹಿಂದೆ ಟಿಪ್ಪು ಜಯಂತಿಯ ಆಚರಣೆಗೆ ಮಹತ್ವದ ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಬಾರೀ  ಡ್ಯಾಮೇಜ್ ಆದ ಹಿನ್ನಲೆ ಇದೀಗ ಟಿಪ್ಪು ಜಯಂತಿ ವಿಚಾರವಾಗಿ ಎಚ್ಚರಿಕೆಯಿಂದ ಹೆಜ್ಜೆ ಇಡಲು ಕಾಂಗ್ರೆಸ್ ನಾಯಕರು ತೀರ್ಮಾನಿಸಿದ್ದಾರೆ.


ಟಿಪ್ಪು ಜಯಂತಿ ವಿಚಾರವಾಗಿ ಎಚ್ಚರಿಕೆ ನಡೆಗೆ ಮುಂದಾದ ಕಾಂಗ್ರೆಸ್ ಜಿಲ್ಲೆಯ  ಮುಸ್ಲಿಂ ಮುಖಂಡರು ಹಾಗೂ ರಾಜ್ಯ  ನಾಯಕರ ಜತೆ ಚರ್ಚಿಸಿ ಬಳಿಕವಚ್ಟೇ ಟಿಪ್ಪು ಜಯಂತಿ ಆಚರಣೆಯ ವಿಚಾರವಾಗಿ ತೀರ್ಮಾನ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :