ಗಂಗಾವತಿ : ಮುಸ್ಲಿಂ ಮುಖಂಡರು ಬೆಳೆಯಬಾರದು ಎಂಬುದು ಕಾಂಗ್ರೆಸ್ ಇಚ್ಛೆಯಾಗಿದೆ. ಹೀಗಾಗಿ ನನ್ನನ್ನು ನನ್ನ ಪಕ್ಷದ ಮುಖಂಡರೇ ಪಿತೂರಿ ನಡೆಸಿ ಸೋಲಿಸಿದ್ದಾರೆಂದು ಆರೋಪಿಸಿರುವ ಇಕ್ಬಾಲ್ ಅನ್ಸಾರಿ, ಕಾಂಗ್ರೆಸ್ ಮುಖಂಡರೇ ಮುಂದೆ ನಿಂತು ಜನಾರ್ಧನ ರೆಡ್ಡಿ ಪರವಾಗಿ ನನ್ನ ಕ್ಷೇತ್ರದಲ್ಲಿ ಪ್ರಚಾರ ಮಾಡಿದರು ಎಂದು ದೂರಿದ್ದಾರೆ. ಕಾಂಗ್ರೆಸ್ ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಪಕ್ಷದ ವಿರುದ್ದ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಈ ಹಿಂದೆಯೂ ಹಲವು ಬಾರಿ ಪಕ್ಷದ ಹಿರಿಯ ಮುಖಂಡರ ವಿರುದ್ದ