ಒಂದೊಂದು ಕಾಲಕ್ಕೆ ಒಂದೊಂದು ವಿವಾದ ಸೃಷ್ಠಿಸುವಲ್ಲಿ ಕಾಂಗ್ರೆಸ್ಸಿಗರು ನಿಸ್ಸೀಮರು ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಹಿಂದೆ ವೀರಶೈವ– ಲಿಂಗಾಯತ, ನಂತರ ಮಹಾದಾಯಿ ಆಯಿತು. ಈಗ ಮತ್ತೊಂದು ವಿವಾದ ಸೃಷ್ಠಿ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ಎಐಎಂಐಎಂ ಸಂಸದ ಅಸಾದುದ್ದೀನ್ ಒವೈಸಿ ಜೊತೆ ಬಿಜೆಪಿ ಒಪ್ಪಂದ ಕೇವಲ ಕಾಂಗ್ರೆಸ್ ವದಂತಿ ಎಂದಿದ್ದಾರೆ. ಜಾತಿ ಜಾತಿ ನಡುವೆ, ಧರ್ಮ-ಧರ್ಮಗಳ ನಡುವೆ