ಧರ್ಮದ ಓಲೈಕೆ ಮಾಡುವ ಕಾಂಗ್ರೆಸಿಗರು ಪಕ್ಷ ಬಿಟ್ಟು ಮುಸ್ಲಿಂ ಲೀಗ್ ಸೇರಿಕೊಳ್ಳಲಿ- ಶೋಭಾ ಕರಂದ್ಲಾಜೆ ವಾಗ್ದಾಳಿ

ಬೆಳಗಾವಿ, ಶನಿವಾರ, 20 ಏಪ್ರಿಲ್ 2019 (09:38 IST)

ಬೆಳಗಾವಿ : ಧರ್ಮದ ಓಲೈಕೆಯನ್ನು ಮಾಡುವ ಕಾಂಗ್ರೆಸ್ಸಿಗರು ತಮ್ಮ ಪಕ್ಷವನ್ನು ವಿಸರ್ಜಿಸಿ ಮುಸ್ಲಿಂ ಲೀಗ್ ಪಕ್ಷವನ್ನು ಸೇರಲಿ ಎಂದು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.


ನಗರದಲ್ಲಿ ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕೇರಳದ ವಯನಾಡ್ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದಾರೆ. ಈ ಮೂಲಕ ಒಂದು ಕೋಮು, ಒಂದು ಧರ್ಮದ ಓಲೈಕೆಯನ್ನು ಮಾಡಿದ್ದಾರೆ. ಕಾಂಗ್ರೆಸ್ ಯಾವ ನೀಚ ಮಟ್ಟಕ್ಕೆ ಇಳಿದಿದೆ ಎಂದು ಜನ ಗಮನಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.


ಹಾಗೇ ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ ಅವರು ನಾನೊಬ್ಬ ಐಕಾನ್, ಹೀರೋ ಅಂತ ಸಚಿವ ಡಿ.ಕೆ.ಶಿವಕುಮಾರ್ ಬಿಂಬಿಸಿಕೊಳ್ಳುತ್ತಿದ್ದಾರೆ. ಅವರು ದಕ್ಷಿಣ ಕರ್ನಾಟಕದಲ್ಲಿ ನಾನೊಬ್ಬ ಪ್ರಭಾವಿ ಅಂತ ತೋರಿಸಿಕೊಂಡಿದ್ದಾರೆ. ಆದರೆ ಅವರ ಗಿಮಿಕ್ ಎಲ್ಲಿಯೂ ವರ್ಕೌಟ್ ಆಗಲ್ಲ. ಶಿವಮೊಗ್ಗ ಲೋಕಸಭಾ ಕ್ಷೇತ್ರ ಅಷ್ಟೇ ಅಲ್ಲ. ಮೈಸೂರು, ಬೆಂಗಳೂರು ಎಲ್ಲಿಯೂ ನಡೆಯಲ್ಲ ಎಂದು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸತೀಶ್ ಜಾರಕಿಹೊಳಿ ವಿರುದ್ಧ ಬ್ರಾಹ್ಮಣ ಸಮುದಾಯದವರು ದೂರು ನೀಡಿದ್ದೇಕೆ?

ಬೆಂಗಳೂರು : ಕಾಂಗ್ರೆಸ್ ನಾಯಕ ಸತೀಶ್ ಜಾರಕಿಹೊಳಿ ವಿರುದ್ಧ ಬ್ರಾಹ್ಮಣ ಸಮುದಾಯದವರು ದೂರು ನೀಡಿದ್ದಾರೆ.

news

ಇರೋ ಏಳು ಸೀಟಿಗೆ ಪ್ರಧಾನಿಯಾಗುವ ಕನಸು ಕಾಣ್ತಿದ್ದಾರೆ: ದೇವೇಗೌಡರಿಗೆ ಯಡಿಯೂರಪ್ಪ ಟಾಂಗ್

ಬೆಂಗಳೂರು: ಒಟ್ಟಾರೆ ಸ್ಪರ್ಧೆ ಮಾಡ್ತಿರೋದು ಏಳು ಲೋಕಸಭಾ ಕ್ಷೇತ್ರದಲ್ಲಿ. ಅಷ್ಟಕ್ಕೇ ಪ್ರಧಾನಿಯಾಗುವ ಕನಸು ...

news

ನಟ ರಜನಿಕಾಂತ್ ವಿಧಾನಸಭೆ ಎಲೆಕ್ಷನ್ ಗೆ ನಿಲ್ತಿನಿ ಅಂದ್ರು!

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿಯೇ ಸಿದ್ಧ ಅಂತ ನಟ ರಜನಿಕಾಂತ್ ಘೋಷಣೆ ಮಾಡಿದ್ದಾರೆ.

news

ಪ್ರತಿ ಲೋಕಸಭೆ ಕ್ಷೇತ್ರದಲ್ಲಿ 50 ಸಾವಿರ ವೋಟರ್ಸ್ ಡಿಲಿಟ್ ಎಂದ ಬಿಜೆಪಿ

ಪ್ರತಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 50 ಸಾವಿರ ಮತದಾರರನ್ನ ಡಿಲಿಟ್ ಮಾಡಿದ್ದಾರೆ. ಕೆಲವು ಕಡೆ ...