ರವಿ ಸಿಗರೇಟ್ ಸೇದಲ್ಲ, ಕುಡಿಯಲ್ಲ, ಡ್ರೈವಿಂಗ್ ಬರಲ್ಲ-ಸಿ.ಟಿ.ರವಿ ಪರವಾಗಿ ಬ್ಯಾಟ್ ಬೀಸಿದ ಕಾಂಗ್ರೆಸ್ ಶಾಸಕ

ಬೆಂಗಳೂರು, ಮಂಗಳವಾರ, 19 ಫೆಬ್ರವರಿ 2019 (11:21 IST)

ಬೆಂಗಳೂರು : ಶಾಸಕ ಸಿ.ಟಿ.ರವಿ ಕಾರು ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಬಿಜೆಪಿ ಶಾಸಕ ಸಿ.ಟಿ.ರವಿ ಪರವಾಗಿ ಬ್ಯಾಟ್ ಬೀಸಿದ್ದಾರೆ.


ಕುಣಿಗಲ್ ತಾಲೂಕಿನ ಉರ್ಕೇಹಳ್ಳಿ ಗೇಟ್ ಬಳಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಶಾಸಕ ಸಿಟಿ ರವಿ ಕಾರು ಮೂತ್ರ ವಿಸರ್ಜನೆ ಮಾಡುತ್ತಿದ್ದ ಇಬ್ಬರು ಯುವಕರಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಮೃತರ ಸ್ನೇಹಿತನೊಬ್ಬ ಶಾಸಕರು ಮದ್ಯಪಾನ ಮಾಡಿ ಕಾರು ಚಲಾಯಿಸಿದ್ದಾರೆ ಎಂದು ಆರೋಪಿಸಿದ್ದಾರೆ.


ಈ ಬಗ್ಗೆ  ಪ್ರತಿಕ್ರಿಯಿಸಿದ ಶಾಸಕ ಆನಂದ್ ಸಿಂಗ್ ಅವರು,’ ಅಪಘಾತದ ಬಗ್ಗೆ ನನಗೆ ಏನೂ ಗೊತ್ತಿಲ್ಲ. ನಾನು ಟಿವಿ ನೋಡಿ ಬಂದಿದ್ದೇನೆ. ರವಿ ಸಿಗರೇಟ್ ಸೇದಲ್ಲ, ಕುಡಿಯುವುದಿಲ್ಲ ಹಾಗೂ ಅವರು ಗಾಡಿ ಓಡಿಸುವುದಿಲ್ಲ. ರವಿ ಅವರು ಬೆಳಗ್ಗೆ ಎದ್ದು ಯೋಗ ಮಾಡುವವರು. ಈ ರೀತಿ ಅವರು ಏನೂ ಮಾಡಲ್ಲ. ಅವರು ನನ್ನನ್ನು ನೋಡಲು ಬಂದಿದ್ದರು. ಆದ್ದರಿಂದ ಅವರನ್ನು ನೋಡಲು ನಾನು ಹೋಗುತ್ತಿದ್ದೇನೆ’ ಎಂದು ಅವರ ಪರವಾಗಿ ಮಾತನಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
                                                                                                      ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪುಲ್ವಾಮಾ ದಾಳಿಯ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಕಮಲ್ ಹಾಸನ್

ಚೆನ್ನೈ : ಪುಲ್ವಾಮಾ ದಾಳಿಗೆ ಸಂಬಂಧಿಸಿದಂತೆ ಸೈನಿಕರು ಕಾಶ್ಮೀರಕ್ಕೆ ತೆರಳೋದೇ ಸಾಯುವುದಕ್ಕೆ ಎಂದು ...

news

ಬಿಜೆಪಿಯಿಂದ ಅಮಾನತುಗೊಂಡಿದ್ದ ಮಾಜಿ ಕ್ರಿಕೆಟ್ ಆಟಗಾರ ಕೀರ್ತಿ ಅಜಾದ್ ಕಾಂಗ್ರೆಸ್‍ಗೆ ಸೇರ್ಪಡೆ

ನವದೆಹಲಿ : ಬಿಜೆಪಿಯಿಂದ ಅಮಾನತುಗೊಂಡಿದ್ದ ಮಾಜಿ ಕ್ರಿಕೆಟ್ ಆಟಗಾರ ಕೀರ್ತಿ ಅಜಾದ್ ಅವರು ಎಐಸಿಸಿ ಅಧ್ಯಕ್ಷ ...

news

ಹಂಪಿ ಸ್ಮಾರಕ ಕೆಡವಿದ ಕಿಡಿಗೇಡಿಗಳಿಗೆ ತಕ್ಕ ಶಾಸ್ತಿ ಮಾಡಿದ ನ್ಯಾಯಾಲಯ

ಬಳ್ಳಾರಿ : ಹಂಪಿ ಸ್ಮಾರಕ ಕೆಡವಿದ ಕಿಡಿಗೇಡಿಗಳ ವಿರುದ್ಧ ಆದೇಶವೊಂದನ್ನು ಹೊರಡಿಸುವುದರ ಮೂಲಕ ನ್ಯಾಯಾಲಯ ...

news

ಮೈತ್ರಿ ಸರ್ಕಾರಕ್ಕೆ ಧಕ್ಕೆ ತರುವಂತಹ ಹೇಳಿಕೆಯನ್ನು ಯಾರೂ ನೀಡಬಾರದು-ಅತೃಪ್ತರಿಗೆ ಖಡಕ್ ಎಚ್ಚರಿಕೆ ನೀಡಿದ ಕಾಂಗ್ರೆಸ್

ಬೆಂಗಳೂರು : ಅತೃಪ್ತ ಕೈ ಶಾಸಕರಿಂದ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರಕ್ಕೆ ಯಾವುದೇ ರೀತಿಯ ...