ಕಳೆದ ಒಂದು ವಾರದಿಂದ ನಮ್ಮ ಮೆಟ್ರೋದಲ್ಲಿ ನಾನಾ ಅನಾಹುತಗಳು ಸಂಭವಿಸಿವೆ. ಹೀಗಾಗಿ ಇದಕ್ಕೆಲ್ಲ ಕಡಿವಾಣ ಹಾಕಲು BMRCL ಮಾಸ್ಟರ್ ಪ್ಲಾನ್ ಮಾಡಿದೆ. ಫ್ಲಾಟ್ ಫಾರಂ ನಿಂದ ಟ್ರ್ಯಾಕ್ ನಡುವೆ ತಡೆಗೋಡೆ ಮಾದರಿಯಲ್ಲಿ ಕಾರ್ಯನಿರ್ವಹಿಸುವ ಫ್ಲಾಟ್ ಫಾರ್ಮ್ ಸ್ಕ್ರೀನ್ ಡೋರ್ ಅನ್ನು ಎಲ್ಲಾ ಮೆಟ್ರೋ ನಿಲ್ದಾಣದಲ್ಲಿ ನಿರ್ಮಾಣಕ್ಕೆ ಪ್ಲಾನ್ ಮಾಡ್ತಿದೆ. ಇನ್ನು ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆಯ ಕಾಮಗಾರಿಗೆ ತುಸು ವೇಗ ಸಿಕ್ಕಿದ್ದು, ಕಾರಿಡಾರ್- 2 ರಲ್ಲಿ ದೇಶದಲ್ಲಿಯೇ ಮೊದಲ ಬಾರಿಗೆ 31 ಮೀ ಉದ್ದದ ಯು ಗರ್ಡರ್ ಅಳವಡಿಕೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.