ರಾಜ್ಯದಲ್ಲಿ ನೆರೆ ಸಂತ್ರಸ್ಥರು ಹಲವು ಕಷ್ಟಗಳನ್ನು ಎದುರಿಸುತ್ತಿದ್ದರೆ ಬಿಜೆಪಿ ಸಂಸದರು ಮಾತ್ರ ವಿವಾದಾತ್ಮಕ ಹೇಳಿಕೆ ನೀಡೋದನ್ನ ಮುಂದುವರಿಸಿದ್ದಾರೆ. ಸಂಸದ ಪ್ರತಾಪ ಸಿಂಹ, ಡಿಸಿಎಂ ಲಕ್ಷ್ಮಣ ಸವದಿ ಈಗಾಗಲೇ ನೆರೆ ಪರಿಹಾರ ಬಗ್ಗೆ ಹಗುರವಾಗಿ ಮಾತನಾಡಿ ಜನರಿಂದ ಟೀಕೆಗೆ ಗುರಿಯಾಗುತ್ತಿದ್ದಾರೆ.ಇದೀಗ ಸಂಸದ ಜಿ.ಎಸ್.ಬಸವರಾಜು ವಿವಾದ ಸೃಷ್ಟಿ ಮಾಡುತ್ತಿದ್ದಾರೆ. ನೆರೆ ಪರಿಹಾರ ನೀಡೋಕೆ ಹಣ ಇದೆ. ಆದರೆ ಪ್ರವಾಹ ಸಂತ್ರಸ್ಥರೇ ಮುಂದೆ ಬಂದು ಪರಿಹಾರ ಪಡೆದುಕೊಳ್ಳುತ್ತಿಲ್ಲ ಅಂತ ಸಚಿವ ಮಾದುಸ್ವಾಮಿ ಹೇಳಿದ್ದರೆ, ಇತ್ತ