ಮಳೆ ನಿಂತರೂ ಮಳೆ ಹನಿ ಬೇಗ ನಿಲ್ಲುವುದಿಲ್ಲ ಎನ್ನುವ ಹಾಗೆ ರಾಜ್ಯದಲ್ಲಿ ವಿಧಾನ ಸಭೆ ಚುನಾವಣೆ ಮುಗಿದರೂ ಚುನಾವಣೋತ್ತರ ಘರ್ಷಣೆಗಳು ಅಲ್ಲಲ್ಲಿ ಮರುಕಳಿಸುತ್ತಲೇ ಇವೆ.ತುಮಕೂರು ಜಿಲ್ಲೆಯ ಪಾವಗಡದಲ್ಲಿ ಚುನಾವಣಾ ರಾಜಕೀಯ ದ್ವೇಷ ಈಗಲೂ ಬೂದಿಮುಚ್ಚಿದ ಕೆಂಡದಂತಿದೆ. ಈ ದ್ವೇಷಕ್ಕೆ ಬೋರ್ ವೆಲ್, ಕೇಬಲ್ ನಾಶಪಡಿಸಲಾಗಿದೆ. ಪಾವಗಡ ತಾಲೂಕಿನ ಹುಸೇನ್ ಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ರೈತ ಕೆ.ಎಸ್.ರೆಡ್ಡಿ ಎಂಬುವರ ಜಮೀನಿನಲ್ಲಿ ದುರುಳರು ಅಟ್ಟಹಾಸ ಮೆರೆದಿದ್ದಾರೆ. ಜಮೀನಿನಲ್ಲಿರುವ ದಾಳಿಂಬೆ, ಶ್ರೀಗಂಧ