ತಮ್ಮ ಗ್ರಾಮದಲ್ಲಿಯೇ ಕುರಿ ಸಂತೆ ನಡೆಸುವಂತೆ ಆ ಎರಡೂ ಗ್ರಾಮಗಳ ಜನರ ನಡುವೆ ವಾಗ್ವಾದ ಮುಂದುವರಿದಿದೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಆಗಾಗ್ಗೆ ಗಲಾಟೆ, ವಾಗ್ವಾದಗಳು ಮುಂದುವರಿಯುತ್ತಲೇ ಇವೆ. ಕೊಪ್ಪಳ ಜಿಲ್ಲೆಯ ಕೂಕನಪಳ್ಳಿ ಹಾಗೂ ಬೂದಗುಂಪಾ ಗ್ರಾಮಸ್ಥರ ನಡುವೆ ವಾಗ್ವಾದ ಮತ್ತೆ ನಡೆದಿದೆ. ಕುರಿ ಮಾರಾಟ ಸಂತೆಯನ್ನು ಮೊದಲು ನಡೆಯುತ್ತಿದ್ದ ಕೂಕನಪಳ್ಳಿ ಗ್ರಾಮದಲ್ಲಿಯೇ ಮಾಡುವಂತೆ ಒತ್ತಾಯ ಕೇಳಿಬಂದಿದೆ. ಕಳೆದ ಮೂರು ವರ್ಷಗಳ ಹಿಂದೆ ಎರಡು ಗ್ರಾಮಸ್ಥರ ನಡುವೆ ಇದೇ ವಿಷಯವಾಗಿ ಗಲಾಟೆ ನಡೆದಿತ್ತು.