ಕಳೆದ ಒಂದೆರಡು ದಿನಗಳಲ್ಲಿ ಸ್ವಲ್ಪ ಮಟ್ಟಿಗೆ ಕಡಿಮೆಯಾದಂತಿದ್ದ ಮಳೆ ಪುನಃ ಧಾರಾಕಾರವಾಗಿ ಸುರಿಯಲಾರಂಭಿಸಿದೆ. ಕೊಂಚ ಬಿಡುವು ಕೊಟ್ಟಿದ್ದ ಮಳೆ ಮತ್ತೆ ಶುರುವಾಗಿರುವುದು ಪ್ರವಾಹ ಪೀಡಿತರನ್ನ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ.ಪರಿಹಾರ ಕಾರ್ಯ ಒಂದೆಡೆ ನಡೆಯುತ್ತಿರುವ ಮಧ್ಯೆಯೇ ಮಳೆ ತುಸು ಕಡಿಮೆಯಾದಂತಿತ್ತು. ಆದರೆ ಈಗ ಧಾರಾಕಾರವಾಗಿ ಸುರಿಯಲಾರಂಭಿಸಿದೆ. ಹೀಗಾಗಿ ನಿರಂತರ ಮಳೆ ಪರಿಹಾರ ಕಾರ್ಯಕ್ಕೆ ಅಡ್ಡಿಯನ್ನು ಮಾಡುತ್ತಿದೆ. ಅಷ್ಟೇ ಅಲ್ಲ, ಅಂದಾಜು 600ಕ್ಕೂ ಹೆಚ್ಚು ಮನೆಗಳು ಸಂಪೂರ್ಣ ಹಾನಿಗೊಳಗಾಗಿದ್ದು, ಸಾವಿರಾರು ಮನೆಗಳು ಭಾಗಶಃ