ರಾಯಚೂರು: ರಾಯಚೂರಿನ ಸಿಂಧನೂರು ನಗರ ಪಾಲಿಕೆಯಲ್ಲಿ ಸರ್ಕಾರಿ ಮಹಿಳಾ ಉದ್ಯೋಗಿ ಮೇಲೆ ಸಹೋದ್ಯೋಗಿಯೊಬ್ಬರು ಕ್ರೂರವಾಗಿ ಹೊಡೆಯುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಶರಣಪ್ಪ ಎಂಬವರು ನಸ್ರೀನ್ ಎಂಬುವವರಿಗೆ ತಡವಾಗಿ ಕಚೇರಿಗೆ ಕೆಲಸಕ್ಕೆ ಬಂದದ್ದಕ್ಕೆ ಹೊಡೆದಿದ್ದಾರೆ. ಸಿಂಧನೂರು ನಗರ ಪಾಲಿಕೆಯಲ್ಲಿ ದ್ವಿತೀಯ ದರ್ಜೆ ಸಹಾಯಕಿಯಾಗಿ ಕೆಲಸ ಮಾಡುತ್ತಿರುವ ನಸ್ರೀನ್, ರಂಜಾನ್ ತಿಂಗಳಾಗಿರುವುದರಿಂದ ಈಗ ಉಪವಾಸದಲ್ಲಿದ್ದಾರೆ. ರಂಜಾನ್ ಆಗಿದ್ದರಿಂದ ಬೆಳಗ್ಗೆ ಕೆಲಸಕ್ಕೆ ಬರುವುದು ತಡವಾಗಿತ್ತು. ಅಂದು ಶನಿವಾರವಾಗಿದ್ದರಿಂದ ಕಚೇರಿ ಕೆಲಸಗಳನ್ನು ಮುಗಿಸಲು