Widgets Magazine

ಗಾಂಧಿ ಮಾಡಿದ ದೊಡ್ಡ ತಪ್ಪಿನಿಂದ ಅಯೋಗ್ಯ ನೆಹರು ಪ್ರಧಾನಿಯಾದ- ಬಿಜೆಪಿ ಶಾಸಕನಿಂದ ವಿವಾದಾತ್ಮಕ ಹೇಳಿಕೆ

ಬಾಗಲಕೋಟೆ| pavithra| Last Modified ಮಂಗಳವಾರ, 28 ಜನವರಿ 2020 (06:26 IST)
ಬಾಗಲಕೋಟೆ : ಮಹಾತ್ಮಾ ಗಾಂಧಿ ಮಾಡಿದ ದೊಡ್ಡ ತಪ್ಪಿನಿಂದ ಅಯೋಗ್ಯ ನೆಹರು ಪ್ರಧಾನಿಯಾದ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.


ಬಾಗಲಕೋಟೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ವಲ್ಲಬಾಯಿ ಪಟೇಲ್ ಗೆ ಅಂದು ಬಹುಮತವಿತ್ತು. ಆದರೂ ಮಹಾತ್ಮಾ ಗಾಂಧಿ ನೆಹರುವನ್ನು ಪ್ರಧಾನಿಯಾಗಿ ಮಾಡಿದರು. ಗಾಂಧೀಜಿ ಮಾಡಿದ ತಪ್ಪಿಗೆ ವಿಲಾಸಿ ಜೀವನ ಮಾಡುತ್ತಿದ್ದ ನೆಹರು ಪ್ರಧಾನಿಯಾದ. ಅವನಿಗೆ ಸಿಗರೇಟ್ ಲಂಡನ್ ನಿಂದ ಬರುತ್ತಿತ್ತು. ಬಟ್ಟೆ ಕ್ಲೀನಿಂಗ್ ಗೆ ಲಂಡನ್ ಗೆ ಕಳುಹಿಸುತ್ತಿದ್ದ. ಇಂತವರು ಬಡವರ ಬಗ್ಗೆ ಮಾತನಾಡುತ್ತಾರೆ ಎಂದು ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದ್ದಾರೆ.


ಅಲ್ಲದೇ ನಮ್ಮ ರಾಜಕಾರಣೀಗಳು ಸೈನಿಕರ ಬಗ್ಗೆ ಪೊಲೀಸರ ಬಗ್ಗೆ ಬಾಯಿಗೆ ಬಂದ ಹಾಗೇ ಮಾತನಾಡುತ್ತಾರೆ. ತಿನ್ನೋಕೆ ಕೂಳಿಲ್ಲದವರು ಸೈನ್ಯಕ್ಕ ಸೇರುತ್ತಾರೆ ಎಂದು ಒಬ್ಬ ಅಯೋಗ್ಯ ಹೇಳುತ್ತಾನೆ ಎಂದು ಮಾಜಿ ಸಿಎಂ ಕುಮಾರಸ್ವಾಮಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :