ಮೈಸೂರು : ಪಠ್ಯ ಪರಿಷ್ಕರಣೆ ವಿಚಾರವಾಗಿ ದಿನಕ್ಕೊಂದು ವಿವಾದ ಭುಗಿಲೇಳುತ್ತಿದ್ದು, ರಾಜ್ಯ ಸರ್ಕಾರ ತೀವ್ರ ಒತ್ತಡ ಎದುರಿಸುತ್ತಿರುವಂತೆ ಕಾಣುತ್ತಿದೆ. ಅದ್ರಲ್ಲೂ ಪಠ್ಯಪುಸ್ತಕ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ತಲೆದಂಡಕ್ಕೆ ದಿನೇ ದಿನೇ ಆಗ್ರಹ ಹೆಚ್ಚುತ್ತಿದೆ. ದೇವನೂರ ಮಹಾದೇವ ಸೇರಿದಂತೆ 6 ಮಂದಿ ಸಾಹಿತಿಗಳು ಪಠ್ಯವಾಪ್ಸಿ ಚಳವಳಿ ಆರಂಭಿಸಿದ್ದಾರೆ.ಬೆಂಗಳೂರು, ಚಾಮರಾಜನಗರ, ಬಾಗಲಕೋಟೆ ಸೇರಿ ಹಲವೆಡೆ ಪ್ರತಿಭಟನೆಗಳು ನಡೆಯುತ್ತಲೇ ಇವೆ. ರಾಷ್ಟ್ರಕವಿ ಕುವೆಂಪುರನ್ನು ಅಪಮಾನಿಸಿದವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದ ಆದಿಚುಂಚನಗಿರಿ ಶ್ರೀಗಳ