ಕುಕ್ಕರ್ ವಿಷಲ್ ನುಂಗಿ ಒಂದು ವರ್ಷದ ಮಗು ಸಾವನ್ನಪ್ಪಿರುವ ಧಾರುಣ ಘಟನೆ ನಡೆದಿದೆ.ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ನಗರಕೆರೆ ಗ್ರಾಮದಲ್ಲಿ ನಗರಕೆರೆ ಗ್ರಾಮದ ಮರಿಲಿಂಗೇಗೌಡ ಮತ್ತು ರೂಪ ದಂಪತಿಗಳ ಒಂದು ವರ್ಷದ ಭುವನ್ ಗೌಡ ಸಾವನಪ್ಪಿದ ಮಗುವಾಗಿದ್ದು, ನಿನ್ನೆ ಸಂಜೆ ಮನೆಯಲ್ಲಿ ಆಟವಾಡುತ್ತಿದ್ದ ಮಗು ಅಚಾನಕ್ಕಾಗಿ ಅಡುಗೆ ಮನೆಗೆ ಹೋಗಿದೆ. ಅಡುಗೆ ಮನೆಯಲ್ಲಿದ್ದ ಕುಕ್ಕರ್ ವಿಷಲ್ ಅನ್ನು ಬಾಯೊಳಗೆ ಹಾಕಿಕೊಂಡು ಹಾಗೆ ನುಂಗಿದೆ. ಮಗುವಿನ ಚೀರಾಟ ನೋಡಿದ ಪೋಷಕರು ತಕ್ಷಣ ಮಗುವನ್ನು ಆಸ್ಪತ್ರೆಗೆ