ಕೊರೋನಾ ವಾರಿಯರ್ಸ್ ಗೆ ಸನ್ಮಾನ ಮತ್ತು ದಿನಸಿ ಕಿಟ್ ಗಳ ವಿತರಣಾ ಕಾರ್ಯಕ್ರಮ

bangalore| geethanjali| Last Modified ಶನಿವಾರ, 3 ಜುಲೈ 2021 (14:59 IST)
ಬೆಂಗಳೂರು: ಜಯನಗರದಲ್ಲಿ ಕೊರೋನಾ ವಾರಿಯರ್ಸ್ ಗೆ ಸನ್ಮಾನ ಮತ್ತು ದಿನಸಿ ಕಿಟ್ ಗಳ ವಿತರಣಾ ಕಾರ್ಯಕ್ರಮ ನಡೆಯಿತ್ತು.ಕಾರ್ಯಕ್ರಮಕ್ಕೆ ಸಿಎಂ ಯಡಿಯೂರಪ್ಪ ಚಾಲನೆ ನೀಡಿದರು.ಜಯನಗರದ ಪಟ್ಟಾಭಿರಾಮನಗರ ವಾರ್ಡ್ ಮಾಜಿ ಕಾರ್ಪೊರೇಟರ್ ಸಿ ಕೆ ರಾಮಮೂರ್ತಿಯವರಿಂದ ಉಚಿತ ದಿನಸಿ ಕಿಟ್ ಗಳ ವಿತರಣೆ ವ್ಯವಸ್ಥೆ ನಡೆಯಿತ್ತು.
 
ಕಾರ್ಯಕ್ರಮದಲ್ಲಿ ಕಂದಾಯ ಸಚಿವ ಆರ್ ಅಶೋಕ್, ಸಂಸದ ತೇಜಸ್ವಿ ಸೂರ್ಯ, ಬಿಜೆಪಿ ಮುಖಂಡ ಎನ್ ಆರ್ ರಮೇಶ್ ಭಾಗಿಯಾಗಿದ್ದರು.
 
ಇದೇ ವೇಳೆ ಮಾತನಾಡಿದ ಸಿ ಎಂ ಯಡಿಯೂರಪ್ಪ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಕಿಟ್ ವಿತರಿಸುವ ಕಾರ್ಯಕ್ರಮ ಅಭಿನಂದನರ್ಹ.ಕೊರೊನಾ ವಾರಿಯಾರ್ಸ್ ಗೆ ಸನ್ಮಾನ ಕಾರ್ಯಕ್ರಮ ಮಾಡಿರುವುದು ಒಳ್ಳೆಯ ಕಾರ್ಯು. ಜೊತೆಗೆ ಹೂ ಬೆಳೆಗಾರರರು, ಕಲಾವಿದರು, ಟ್ಯಾಕ್ಸಿ ಚಾಲಕರಿಗೆ ನೇರವಾಗಿ ಅವರ ಖಾತೆಗೆ ಹಣವನ್ನ  ನೀಡಿಲಾಗಿದೆ.ಮೂರನೇ ಅಲೆ ಎದುರಿಸಲು ಸರ್ಕಾರ ಈಗಾಗಲೇ ಸಿದ್ದತೆ ನಡೆಸಿದೆ.
 
ರಾಜ್ಯದಲ್ಲಿ ಲಸಿಕಾ ಅಭಿಯಾನ ಕೈಗೊಂಡಿದ್ದು, ಇನ್ನೂ ಹೆಚ್ಚಿನ. ಲಸಿಕೆಯನ್ನ ನೀಡಲಾಗುತ್ತದೆ.ಕೊರೊನಾ ಸಂಕಷ್ಟದಲ್ಲಿ ರಾಮಮೂರ್ತಿಯವರೂ ಜನರಿಗೆ ನೆರವಾಗಿದ್ದಾರೆ‌.ನಾಡಿನ ಪ್ರತಿಯೊಬ್ಬರು ಕೊರೊನಾ ನಿಯಮ ಪಾಲಿಸಿ ಎಂದು ಸಿಎಂ  ಮನವಿ ಮಾಡಿದ್ದರು


ಇದರಲ್ಲಿ ಇನ್ನಷ್ಟು ಓದಿ :