ರಾಜ್ಯದಲ್ಲಿ ಮುಂಬೈ ನಂಟಿನಲ್ಲಿ ಕೊರೊನಾ ಮಹಾಸ್ಫೋಟಗೊಳ್ಳುತ್ತಾ ಸಾಗುತ್ತಿದೆ. ಹಾಸನ ಜಿಲ್ಲೆಯಲ್ಲಿ ಹೊಸದಾಗಿ 13 ಕೋವಿಡ್-19 ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 112 ಕ್ಕೆ ಏರಿಕೆಯಾಗಿದೆ. ವರದಿಯಾದ ಎಲ್ಲಾ ಹೊಸ ಪ್ರಕರಣಗಳಿಗೆ ಮುಂಬೈ ಮೂಲದ ನಂಟಿದೆ ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ತಿಳಿಸಿದ್ದಾರೆ.ಹಾಸನ ಜಿಲ್ಲೆಗೆ ಮಹಾರಾಷ್ಟ್ರ, ಮುಂಬೈನಿಂದ ಹೆಚ್ಚಿನ ಜನರು ಆಗಮಿಸಿದ್ದು, ಕೊರೊನಾ ಸೋಂಕು ವ್ಯಾಪಕವಾಗಿ ಹಬ್ಬುತ್ತಿದೆ. ಹೊಸ ಕೇಸ್ ಗಳಲ್ಲಿ ಆರು ಮಂದಿ ಮಹಿಳೆಯರು ಹಾಗೂ 7 ಮಂದಿ ಪುರುಷರಾಗಿದ್ದು,