Widgets Magazine

ಕೊರೊನಾ ಎಫೆಕ್ಟ್ : ಒಂದು ವಾರ ಜಾತ್ರೆ, ಮಾಲ್, ಸಿನಿಮಾ ಥೇಟರ್ ಬಂದ್ ಎಂದ ಸಿಎಂ

ಬೆಂಗಳೂರು| Jagadeesh| Last Modified ಶುಕ್ರವಾರ, 13 ಮಾರ್ಚ್ 2020 (17:39 IST)
ಕೊರೊನಾಕ್ಕೆ ರಾಜ್ಯದಲ್ಲಿ ಮೊದಲ ಸಾವು ಸಂಭವಿಸಿರೋದ್ರಿಂದ ಮುಂಜಾಗೃತ ಕ್ರಮವಾಗಿ ಸರಕಾರ ದಿಟ್ಟ ಹೆಜ್ಜೆ ಕೈಗೊಂಡಿದೆ.

ಮುಂದಿನ ಒಂದು ವಾರದವರೆಗೆ ಸಿನಿಮಾ ಹಾಲ್, ಜಾತ್ರೆಗಳು ಹಾಗೂ ಸಮಾರಂಭ, ಶಾಲೆ ಕಾಲೇಜುಗಳನ್ನು ಬಂದ್ ಮಾಡುವಂತೆ ಮುಖ್ಯಮಂತ್ರಿ ಆದೇಶ ಹೊರಡಿಸಿದ್ದಾರೆ.

ಮದುವೆ, ಸಮ್ಮರ್ ಕ್ಯಾಂಪ್, ಸಭೆಗಳು, ಮೆರವಣಿಗೆ ಸೇರಿದಂತೆ ಹೆಚ್ಚು ಜನರು ಸೇರುವ ಕಾರ್ಯಕ್ರಮಗಳನ್ನು ಬಂದ್ ಮಾಡುವಂತೆ ಸರಕಾರ ಆದೇಶ ಹೊರಡಿಸಿದೆ.

ಕೊರೊನಾ ಎಫೆಕ್ಟ್ ಕುರಿತು ನಡೆಸಿದ ತುರ್ತು ಸಭೆ ಬಳಿಕ ಸಿಎಂ, ಒಂದು ವಾರ ಶಾಲೆ, ಕಾಲೇಜ್, ವಿಶ್ವವಿದ್ಯಾಲಯ ಸೇರಿದಂತೆ ಮೊದಲಾದವುಗಳನ್ನು ಬಂದ್ ಮಾಡುವಂತೆ ಸೂಚನೆ ಕೊಟ್ಟಿದ್ದಾರೆ.
 


ಇದರಲ್ಲಿ ಇನ್ನಷ್ಟು ಓದಿ :