ಕೊರೋನಾ ಸಾಂಕ್ರಾಮಿಕ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಇದೀಗ ಅಗ್ನಿಶಾಮಕ ತಂಡ ಕೈ ಜೋಡಿಸಿದೆ. ಕಲಬುರಗಿ ನಗರದೆಲ್ಲೆಡೆ ಶುಚಿತ್ವ ಮತ್ತು ನೈರ್ಮಲ್ಯ ಕಾಪಾಡುವ ಉದ್ದೇಶದಿಂದ ಮಹಾನಗರ ಪಾಲಿಕೆಯು ಡಿಸ್ ಇನ್ಫೆಕ್ಷನ್ ಮತ್ತು ಹೈಪೊಫ್ಲೋರೈಡ್ ಔಷಧಿ ಸಿಂಪರಣೆ ಕಾರ್ಯ ಮಾಡುತ್ತಿದ್ದು, ಇದಕ್ಕೀಗ ಅಗ್ನಿಶಾಮಕ ಇಲಾಖೆಯ ಫೈರ್ ತಂಡ ಕೈಜೋಡಿಸಿದೆ. ಕಲಬುರಗಿಯ ಇ.ಎಸ್.ಐ.ಸಿ ಆಸ್ಪತ್ರೆ ಎದುರುಗಡೆ ಇರುವ ಜ್ಞಾನಗಂಗಾ ಕಾಲೋನಿಯಲ್ಲಿ ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ರಾಹುಲ್ ಪಾಂಡ್ವೆ ಅವರ ಸೂಚನೆಯಂತೆ ಫೈರ್ ತಂಡ