ಬೆಳಗ್ಗೆಯಷ್ಟೇ ಮೂವರಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದ ಹಾಸನದಲ್ಲಿ ಸಂಜೆ ಸಂಜೆ ಮತ್ತೊಂದು ಪ್ರಕರಣ ಪತ್ತೆಯಾಗಿದೆ. ಒಟ್ಟು 4 ಮಂದಿಗೆ ಹೊಸದಾಗಿ ಸೋಂಕು ತಗುಲಿದೆ.ಪಾಸಿಟಿವ್ ಬಂದಿರುವವರು ಚನ್ನರಾಯಪಟ್ಟಣ ತಾಲ್ಲೂಕಿನ 18 ವರ್ಷದ ಯುವಕನಾಗಿದ್ದು, ಮುಂಬೈಯಿಂದ 26 ಜನ ಬಂದಿದ್ದ ಬಸ್ ನಲ್ಲಿ ಈತನೂ ಪ್ರಯಾಣಿಸಿದ್ದ.ಈ ಮೂಲಕ ಸದ್ಯ ಜಿಲ್ಲೆಯ ಸೋಂಕಿತರ ಸಂಖ್ಯೆ 20ಕ್ಕೆ ಏರಿಕೆಯಾಗಿದೆ.