Widgets Magazine

ರಾಜ್ಯದಲ್ಲಿ ಕೊರೊನಾ ಭೀತಿ ಹಿನ್ನಲೆ; ಅಂತರಾಷ್ಟ್ರೀಯ ವಿಮಾನಕ್ಕೆ ನಿಷೇಧ ಹೇರಲು ರಾಜ್ಯ ಸರ್ಕಾರ ಚಿಂತನೆ

ಬೆಂಗಳೂರು| pavithra| Last Modified ಗುರುವಾರ, 19 ಮಾರ್ಚ್ 2020 (11:49 IST)
ಬೆಂಗಳೂರು : ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಇಂದಿನಿಂದ ಬೆಂಗಳೂರಿನ ಏರ್ ಪೋರ್ಟ್ ನಲ್ಲಿ ಅಂತರಾಷ್ಟ್ರೀಯ ವಿಮಾನಕ್ಕೆ ನಿಷೇಧ ಹೇರಲು ರಾಜ್ಯ ಸರ್ಕಾರ  ಮುಂದಾಗಿದೆ.


ಕರ್ನಾಟಕದಲ್ಲಿ ಈಗಾಗಲೇ ಕೊರೊನಾ ಸೋಂಕಿತರ ಸಂಖ್ಯೆ 15ಕ್ಕೆ ಏರಿಕೆಯಾಗಿದ್ದು, ಅದರಲ್ಲೂ ವಿದೇಶದಿಂದ ಬಂದವರಿಗೆ ಕೊರೊನಾ ಸೋಂಕು ಹೆಚ್ಚಾಗಿ ಕಂಡುಬಂದಿದ್ದರಿಂದ ಕೊರೊನಾ ಸೋಂಕು ಇನ್ನಷ್ಟು ಹರಡುವ ಭೀತಿಯಿಂದ ಇಂದಿನಿಂದ ಬೆಂಗಳೂರಿಗೆ ಯಾವುದೇ ದೇಶಗಳಿಂದ ಅಂತರಾಷ್ಟ್ರೀಯ ವಿಮಾನಗಳು ಬಾರದಂತೆ ನಿಷೇಧ ಹೇರಲು ಚಿಂತಿಸಲಾಗಿದೆ ಎನ್ನಲಾಗಿದೆ.


ಈ ಬಗ್ಗೆ ಟ್ವೀಟ್ ಮಾಡಿರುವ ಸಚಿವ ಶ್ರೀರಾಮುಲು, ಸೋಂಕು ಹರಡದಂತೆ ತಡೆಗಟ್ಟಲು ಈ ನಿರ್ಧಾರ ಕೈಗೊಳ್ಳಲಾಗಿದೆ. ಮುನ್ನೇಚ್ಚರಿಕಾ ಕ್ರಮವಾಗಿ ಬೆಂಗಳೂರಿಗೆ ಯಾವುದೇ ದೇಶಗಳಿಂದ ಅಂತರಾಷ್ಟ್ರೀಯ ವಿಮಾನಗಳು ಬಾರದಂತೆ ನಿರ್ಬಂಧ ವಿಧಿಸಲು ಚಿಂತಿಸಲಾಗಿದೆ ಎಂದು ತಿಳಿಸಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :