ಬೆಂಗಳೂರು : ಕೊರೊನಾ ಸೋಂಕಿತರು ಎಸ್ಕೇಪ್ ಆಗುತ್ತಿದ್ದಾರೆ ಎಂದು ಸಚಿವ ಅಶೋಕ್ ಅವರು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, 3ರಿಂದ 4 ಸಾವಿರ ಸೋಂಕಿತರು ನಾಪತ್ತೆಯಾಗಿದ್ದಾರೆ. ಕೆಲವರು ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಕೆಲ ಸೋಂಕಿತರು ಮನೆ ಖಾಲಿ ಮಾಡಿದ್ದಾರೆ. ಇಂಥ ಸೋಂಕಿತರನ್ನು ಹುಡುಕುವುದು ಕಷ್ಟ. ಸೋಂಕಿತರನ್ನು ಪೊಲೀಸರು ಹುಡುಕುತ್ತಿದ್ದಾರೆ ಎಂದು ಸಚಿವ ಆರ್ ಅಶೋಕ್ ಹೇಳಿದ್ದಾರೆ. ಸೋಂಕಿತರ ನಿರ್ಲಕ್ಷ್ಯವೇ ಸೋಂಕು ಏರಿಕೆಗೆ ಕಾರಣ. ಪಾಸಿಟಿವ್ ಬಂದ್ರೆ