ಕೊರೊನಾ ವೈರಸ್ ನಿಂದ ಸೋಂಕಿತರಾಗಿದ್ದ ಸಂಸದೆ ಸುಮಲತಾ ಅಂಬರೀಶ್ ಗೆ ಕೊರೊನಾ ನೆಗಟಿವ್ ಬಂದಿದೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವಿಷಯ ತಿಳಿಸಿರುವ ಸಂಸದೆ ಸುಮಲತಾ ಅಂಬರೀಶ್, ಕ್ವಾರಂಟೈನ್ ಅವಧಿ ಮುಗಿಸಿ ಗುಣಮುಖರಾಗಿದ್ದಾಗಿ ತಿಳಿಸಿದ್ದಾರೆ.ನಿಮ್ಮ ಆಶೀರ್ವಾದ, ಪ್ರೀತಿಗೆ ಧನ್ಯವಾದ ಎಂದಿರುವ ಸುಮಲತಾ, ಕೊರೊನಾ ಬಂದಾಗ ಹೆದರಬೇಡಿ. ವೈದ್ಯರು ಹೇಳುವ ಸಲಹೆ ಪಾಲಿಸಿ ಎಂದಿದ್ದಾರೆ.