ಕೊರೊನಾ ಭೀತಿ : ಬಿಜೆಪಿ ಸಂಸದರ ಪುತ್ರನಿಂದ ಮಾಸ್ಕ್ ವಿತರಣೆ

ಕೊಪ್ಪಳ| Jagadeesh| Last Updated: ಸೋಮವಾರ, 23 ಮಾರ್ಚ್ 2020 (11:39 IST)
ಕೊರೊನಾ ಭೀತಿ ಹಿನ್ನೆಲೆಯಲ್ಲಿ ಬಿಜೆಪಿ ಸಂಸದರ ಪುತ್ರರೊಬ್ಬರು ಜನರಿಗೆ ಉಚಿತವಾಗಿ ಮಾಸ್ಕ್ ವಿತರಣೆ ಮಾಡಿದ್ದಾರೆ.

ಕೊಪ್ಪಳ ಜಿಲ್ಲಾ ಕೇಂದ್ರದಲ್ಲಿ ಕೊರೋನಾ ಬಗ್ಗೆ ಜಾಗೃತಿ ಮೂಡಿಸುವುದರೊಂದಿಗೆ ಉಚಿತವಾಗಿ ಮುಖ ಕವಚ ನೀಡಲಾಯಿತು.
ನಗರದ ಖಾಸಿ ಪೆಟ್ರೋಲ್ ಬಂಕ್ ಸೇರಿದಂತೆ ಹಲವೆಡೆ ಅಮರೇಶ ಕರಡಿ ನೇತೃತ್ವದಲ್ಲಿ ಮುಖ ಕವಚವನ್ನು ಉಚಿತವಾಗಿ ನೀಡಲಾಯಿತು.

ಎಲ್ಲರು ಜನತಾ ಕರ್ಫ್ಯೂವನ್ನು ಪಾಲಿಸಬೇಕು. ಮನೆಯಲ್ಲಿ ಇದ್ದು  ಎಲ್ಲರು ಸಹಕರಿಸಬೇಕು ಎಂದು ಬಿಜೆಪಿ ಸಂಸದ ಸಂಗಣ್ಣ ಕರಡಿ ಪುತ್ರರಾಗಿರುವ ಅಮರೇಶ ಕರಡಿ ಮನವಿ ಮಾಡಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :