ಕೊರೊನಾ ವಾರಿಯರ್ಸ್ ಗಳಾದ ಪೊಲೀಸರಿಗೆ ಇದೀಗ ಕೊರೊನಾ ಕಾಟ ವಿಪರೀತವಾಗಿ ಶುರುವಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಪೊಲೀಸರ ಜೊತೆಗೆ ಇದೀಗ ಅಗ್ನಿ ಶಾಮಕ ಸಿಬ್ಬಂದಿಗೂ ಕೊರೊನಾ ಆತಂಕ ಆರಂಭಗೊಂಡಿದೆ.ಅಗ್ನಿ ಶಾಮಕದ ಇಬ್ಬರು, ಪೊಲೀಸರಿಬ್ಬರಿಗೆ ಕೋವಿಡ್ -19 ದೃಢಪಟ್ಟಿದೆ. ಇದುವರೆಗೂ ಬೆಂಗಳೂರಿನಲ್ಲಿ 145 ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಐವರು ಸಾವನ್ನಪ್ಪಿದ್ದಾರೆ.