ಶೌಚಾಲಯದಲ್ಲಿ ಸತ್ತ ಕೊರೊನಾ ರೋಗಿ?

ಕಲಬುರಗಿ| Jagadeesh| Last Modified ಬುಧವಾರ, 29 ಜುಲೈ 2020 (22:13 IST)
ಕೊರೊನಾ ಪಾಸಿಟಿವ್ ಇದ್ದ ರೋಗಿಯೊಬ್ಬ ಶೌಚಾಲಯಲ್ಲಿ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.

ಶೌಚಾಲಯದಲ್ಲಿ‌ ಕಾಲು ಜಾರಿ ಬಿದ್ದು ಕೊರೊನಾ ರೋಗಿ ಸಾವನ್ನಪ್ಪಿರುವುದು ವರದಿಯಾಗಿದೆ.

ಕಲಬುರಗಿಯ ಜಿಮ್ಸ್ ಆಸ್ಪತ್ರೆಯ ಕೋವಿಡ್ ಆಸ್ಪತ್ರೆಯಲ್ಲಿ ಬೆಳಗ್ಗೆ ಶೌಚಾಲಯಕ್ಕೆ ತೆರಳಿದ್ದ ಕೊರೊನಾ ಸೋಂಕಿತ ವ್ಯಕ್ತಿ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾರೆ.

ಕಲಬುರಗಿ ನಗರದ ನಿವಾಸಿ ಬಸವರಾಜ್ ಹಿರೇಮಠ್ (42) ಮೃತ ವ್ಯಕ್ತಿಯಾಗಿದ್ದಾರೆ.

ಕಾಲು ಜಾರಿ ಬಿದ್ದು ಒದ್ದಾಡಿದ್ದಾರೆ. ಇದನ್ನು ಯಾರೂ ಗಮನಿಸದ ಕಾರಣ ಆತ ನರಳಾಡಿ ಅಲ್ಲಿಯೇ ಪ್ರಾಣ ಬಿಟ್ಟಿದ್ದಾರೆ ಎನ್ನಲಾಗುತ್ತಿದೆ.


 
ಇದರಲ್ಲಿ ಇನ್ನಷ್ಟು ಓದಿ :