ಕರ್ನಾಟಕ ರಾಜ್ಯ ಮೀಸಲು ಪಡೆ (ಕೆಎಸ್ಆರ್ಪಿ) ಕಾನ್ಸ್ಟೆಬಲ್ವೊಬ್ಬರಿಗೆ ಕೊರೊನಾ ಸೋಂಕು ಶಂಕಿತ ಲಕ್ಷಣಗಳು ಕಂಡು ಬಂದಿದ್ದು, ಅವರ ಗಂಟಲು ದ್ರವ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಬಳ್ಳಾರಿಯಿಂದ ಹಾವೇರಿ ಜಿಲ್ಲೆಗೆ ಕೋವಿಡ್–19 ಕರ್ತವ್ಯದ ಮೇಲೆ ಬಂದಿದ್ದ ಕಾನ್ಸ್ಟೆಬಲ್ ಇವರಾಗಿದ್ದಾರೆ. ಲಾಕ್ಡೌನ್ ಬಂದೋಬಸ್ತ್ಗಾಗಿ ಕೆಎಸ್ಆರ್ಪಿ ತುಕಡಿಗೆ ಸೇರಿದ 25 ಮಂದಿ ಜಿಲ್ಲೆಗೆ ಬಂದಿದ್ದರು. ಕಾನ್ಸ್ಟೆಬಲ್ವೊಬ್ಬರಿಗೆ ಕೆಮ್ಮು, ಜ್ವರ, ನೆಗಡಿ ಲಕ್ಷಣಗಳು ಕಾಣಿಸಿಕೊಂಡವು. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ತುಕಡಿಯಲ್ಲಿದ್ದ ಎಲ್ಲರನ್ನೂ ಆರೋಗ್ಯ ತಪಾಸಣೆ ಮಾಡಿ, ಕೆರೆಮತ್ತಿಹಳ್ಳಿಯಲ್ಲಿರುವ