ಡೆಡ್ಲಿ ಕೊರೊನಾ ವೈರಸ್ ಕೇಂದ್ರ ಸರಕಾರದ ಸಚಿವರೊಬ್ಬರಿಗೆ ತಗುಲಿದೆ.ಆಯುಷ್ ಖಾತೆ ರಾಜ್ಯ ಸಚಿವರಾಗಿರುವ ಶ್ರೀಪಾದ್ ನಾಯಕ್ ಅವರಿಗೆ ಕೊರೊನಾ ದೃಢಪಟ್ಟಿದೆ. ಕೋವಿಡ್ – 19 ದೃಢಪಡುತ್ತಿದ್ದಂತೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.ತಮ್ಮ ಸಂಪರ್ಕಕ್ಕೆ ಬಂದವರು ತಪ್ಪದೇ ಕೋವಿಡ್ -19 ಪರೀಕ್ಷೆ ಮಾಡಿಸಿಕೊಳ್ಳಬೇಕು. ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕೆಂದು ಸಚಿವ ಶ್ರೀಪಾದ್ ನಾಯಕ್ ಹೇಳಿದ್ದಾರೆ.