Widgets Magazine

ಐಸೋಲೇಷನ್ ವಾರ್ಡ್ ನಲ್ಲಿದ್ದ ಕೊರೊನಾ ಶಂಕಿತ ನಾಪತ್ತೆ

ಕೊಪ್ಪಳ| pavithra| Last Modified ಸೋಮವಾರ, 18 ಮೇ 2020 (10:27 IST)
: ಐಸೋಲೇಷನ್ ವಾರ್ಡ್ ನಲ್ಲಿದ್ದ 42 ವರ್ಷದ ವ್ಯಕ್ತಿ ನಾಪತ್ತೆಯಾದ ಘಟನೆ  ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ನಡೆದಿರುವುದಾಗಿ ತಿಳಿದುಬಂದಿದೆ.


ಮೇ11 ರಂದು ಮಹಾರಾಷ್ಟ್ರದಿಂದ  ಕೊಪ್ಪಳಕ್ಕೆ  ಬಂದಿದ್ದ ವ್ಯಕ್ತಿಗೆ  ಕೊರೊನಾ ಶಂಕೆ ಹಿನ್ನಲೆಯಲ್ಲಿ ಐಸೋಲೇಷನ್ ವಾರ್ಡ್ ನಲ್ಲಿಡಲಾಗಿತ್ತು. ವ್ಯಕ್ತಿಯ ಕೊವಿಡ್ ವರದಿಯಲ್ಲಿ ನೆಗೆಟಿವ್ ಬಂದಿದೆ.


ಆದ್ರೆ ಡಿಸ್ಚಾರ್ಜ್ ಮಾಡುವ ಮುನ್ನವೇ ವ್ಯಕ್ತಿ ನಾಪತ್ತೆಯಾದ ಕಾರಣ ಜಿಲ್ಲಾಸ್ಪತ್ರೆ ವೈದ್ಯ ಪ್ರಕಾಶ್ ವ್ಯಕ್ತಿಯ ವಿರುದ್ಧ ಕೊಪ್ಪಳ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

 


ಇದರಲ್ಲಿ ಇನ್ನಷ್ಟು ಓದಿ :