ಕೋವಿಡ್ – 19 ನಿಂದಾಗಿ ಕೋಳಿ, ಕುರಿ ನಂತರ ಇದೀಗ ಮೀನಿಗೂ ಸಂಚಕಾರ ಬಂದೊದಗಿದೆ. ಕೋವಿಡ್ 19 ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಮಾ.24 ರಿಂದ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಮೀನುಗಾರಿಕಾ ಚಟುವಟಿಕೆ ಬಂದ್ ಮಾಡುವಂತೆ ಮೀನುಗಾರಿಕಾ ಉಪನಿರ್ದೇಶಕರು ಸೂಚನೆ ನೀಡಿದ್ದಾರೆ.ಈಗಾಗಲೇ ಜಿಲ್ಲಾಡಳಿತ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಐದು ಮತ್ತು ಅದಕ್ಕಿಂತ ಹೆಚ್ಚು ಜನರು ಗುಂಪು ಸೇರುವುದು, ಓಡಾಡುವುದು ಅಥವಾ ಇನ್ನಿತರ ಚಟುವಟಕೆಗಳ ಮೇಲೆ ಸಂಪೂರ್ಣ ನಿಷೇಧ ಹೇರಿದೆ. ಆದರೆ