ಬೆಂಗಳೂರಿನ ಪಾದರಾಯನಪುರದಲ್ಲಿ ಪೊಲೀಸ್, ಕೊರೊನಾ ವಾರಿಯರ್ಸ್ ಗಳ ಮೇಲೆ ನಡೆದ ಹಲ್ಲೆ ಘಟನೆಗೆ ಸರಕಾರ ಗರಂ ಆಗಿದ್ದು, ಪುಡಿ ರೌಡಿಗಳ ಬಾಲ ಕಟ್ ಮಾಡ್ತೇವೆ ಅಂತ ಸಚಿವರೊಬ್ಬರು ತೊಡೆತಟ್ಟಿದ್ದಾರೆ. ಆಶಾ ಕಾರ್ಯಕರ್ತೆಯರ ಮೇಲೆ ನಡೆದ ಹಲ್ಲೆ ಹಾಗೂ ಪಾದರಾಯನಪುರದಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿದ ಗುಂಪಿನ ಬಾಲ ಕಟ್ ಮಾಡ್ತೇವೆ. ಬಾಯಲ್ಲಿ ಹೇಳಿದ್ರೆ ಕೇಳೋದಿಲ್ಲ. ಇನ್ನೇನಿದ್ರೂ ದಂಡಂ ದಶಗುಣಂ ಅಂತ ಸಚಿವ ಸಿ.ಟಿ.ರವಿ ಹೇಳಿದ್ದಾರೆ.ಗಲಭೆಯಲ್ಲಿ ಪಾಲ್ಗೊಂಡವರ ಬಾಲ ಕಟ್ ಮಾಡ್ತೇವೆ.